Scratch pad
ಹುಚ್ಚು ಮನಸಿನ ಹತ್ತು ಮುಖಗಳು...
ಶುಕ್ರವಾರ, ಜುಲೈ 24, 2009
ಬುಧವಾರ, ಜುಲೈ 22, 2009
ಉಠಾ ಬೈಸ್ - ಸೂಪರ್ ಬ್ರೈನ್ ಯೋಗ
ಉಠಾ ಬೈಸ್ - ಸೂಪರ್ ಬ್ರೈನ್ ಯೋಗ
ಉತ್ತರ ಕರ್ನಾಟಕದಲ್ಲಿ ಗಣೇಶ ಚತುರ್ಥಿಯ ಸಮಯದಲ್ಲಿ ಮನೆ ಮನೆಯಲ್ಲೂ, ಸಾರ್ವಜನಿಕ ಸ್ಥಳಗಳಲ್ಲಿಯೂ ಗಣಪತಿ ಕೂಡಿಸುವದ ಸರ್ವೇ ಸಾಮಾನ್ಯ. ಅದರಂತೆ ಮತ್ತೊಂದು ವಿಷಯ ಏನಪ್ಪಾ ಅಂದ್ರೆ ಗಣಪತಿಗೆ ನಮಸ್ಕರಿಸೋ ಪದ್ಧತಿ.
ಬಲಗೈಯಲ್ಲಿ ಎಡಕಿವಿ ಮತ್ತು ಎಡಗೈಯಲ್ಲಿ ಬಲಕಿವಿ ಹಿಡಿದುಕೊಂಡು ಕುಳಿತು ಏಳುವದು. ಇದಕ್ಕೆ ನಮ್ಕಡೆ ಉಠಾ-ಬೈಸ್ (ಮರಾಠಿ ಮೂಲ ಇರ್ಬೊದು, ಉಠಾ = ಏಳು, ಬೈಸ್ = ಕುಳಿತುಕೊಳ್ಳು) ಅಂತಾರೆ.
ಈಗ ಇದೆ ಪಾಶ್ಚಾತ್ಯ ದೇಶಗಳಲ್ಲಿ 'ಸೂಪರ್ ಬ್ರೈನ್ ಯೋಗ' ಎಂಬ ಹೆಸರಿನಲ್ಲಿ ಮಾಡ್ತಾ ಇದ್ದಾರೆ.
ಈ ಕೆಳಗಿನ ವಿಡಿಯೋ ನೋಡಿ :)
ವಿ ಸೂ: ನಾನು ಈ ಪದ್ಧತಿ ನೋಡಿದ್ದು ಉ.ಕರ್ನಾಟಕದಲ್ಲಿ ಮಾತ್ರ, ಹಾಗಂತ ಬೇರೆಲ್ಲೂ ಈ ಥರ ಮಾಡೊಲ್ಲ ಅಂತ ಅರ್ಥ ಅಲ್ಲ.
ಲೇಬಲ್‌ಗಳು: ಉಠಾ ಬೈಸ್, ಸೂಪರ್ ಬ್ರೈನ್ ಯೋಗ


